ಮಾಟ,ಮಂತ್ರ,ವಾಮಾಚಾರ ಹಾಗೂ ಹೆಣ್ಣು ಮಕ್ಕಳ ಯಾವುದೇ ಸಮಸ್ಯೆ ಇದ್ದರೂ ಈ ದೇವಿಯ ಬಳಿ ಬಂದರೆ ಸಾಕು ಸಕಲ ಸಂಕಷ್ಟಗಳು ದೂರಾಗುತ್ತದೆ..!ಹುಲಿಯೂರಮ್ಮನ ಪವಾಡ ನೋಡಿ..!


ದೇಗುಲ ದರ್ಶನ ಕರ್ನಾಟಕ ತಂಡದಿಂದ ಅತ್ಯುತ್ತಮ ದೈವ ಮಾಹಿತಿ ನಿಮಗಾಗಿ ಓದಿ ತಪ್ಪದೇ ಶೇರ್ ಮಾಡಿ.ಶ್ರೀ ಹುಲಿಯೂರಮ್ಮ ದೇವಿಯ ಪವಾಡಗಳನ್ನು ನಾವು ಇಂದು ತಿಳಿಸುತ್ತೇವೆ.ಇಂದಿಗೂ ಮೈಸೂರು ಅರಮನೆಯಿಂದ ಒಂದು ಆರತಿ ಈ ದೇವಿಗೆ ಬರುತ್ತದೆಯೆಂದರೆ ದೇವಿಯ ಮಹಿಮೆ ಏನು ಕೇಳಿ.ಒಮ್ಮೆ ಮೈಸೂರಿನ ರಾಜರೊಬ್ಬರೂ ಈ ದಾರಿಯಲ್ಲಿ ಹೋಗಬೇಕದಾರೆ ದೇವಿಯನ್ನು ನೋಡಿ ಅಪಹಾಸ್ಯ ಮಾಡುತ್ತಾರೆ ಆಗ ಆ ರಾಜರಿಗೆ ಸಾಕಷ್ಟು ತೊಂದರೆಗಳು ಉಂಟಾಗುತ್ತದೆ ತದನಂತರ‌‌ ಆ ರಾಜರು ದೇವಿಗೆ ತಪ್ಪಾಯಿತೆಂದು ಕಾಣಿಕೆ ಕಟ್ಟಿ ಪ್ರತಿ ವರ್ಷ ದೇವಿಗೆ ಅರಮನೆಯಿಂದ ಆರತಿ ಕಳಿಸಿಕೊಡುತ್ತಾರೆ.ಶಕ್ತಿಶಾಲಿ ದೇವಿಯಾದ ಶ್ರೀ ಹುಲಿಯೂರಮ್ಮ ದೇವಿಯ ಮಹಿಮೆ ಅಪಾರ.ದೇಗುಲ ದರ್ಶನ ಕರ್ನಾಟಕ.
ಹುಲಿಯೂರಮ್ಮ ದೇವಿ(ಶ್ರೀ ಚಾಮುಂಡೇಶ್ವರಿ)
ಮಾಟ ಮಂತ್ರ,ವಾಮಾಚಾರ ,ದೆವ್ವ ದುಷ್ಟ ಶಕ್ತಿಗಳ ಕಾಟ,ವ್ಯಾಪಾರ-ನಷ್ಟ ,ವಿದ್ಯೆ ಸಂತಾನ ಭಾಗ್ಯಕ್ಕೆ ,ಕಂಕಣ ಭಾಗ್ಯ,ಗುಪ್ತ ಸಮಸ್ಯೆಗಳ ನಿವಾರಣೆಗೆ ಶ್ರೀ ಹುಲಿಯೂರಮ್ಮ ದೇವಿಯ ಹತ್ತಿರ ಬಂದರೆ ಸಾಕು.ದೇವಿಯು ಒವಾಡ ರೀತಿಯಲ್ಲಿ ಭಕ್ತರನ್ನು ಕಾಪಾಡುತ್ತಿದ್ದಾಳೆ.ಹುಲಿ ಪಟ್ಟಣದಲ್ಲಿ ನೆಲೆಸಿರುವ ಸಾಕ್ಷಾತ್ ಪಾರ್ವತಿ ದೇವಿ ಈ ಮಹಾಮಾಯಿ ಹೆಣ್ಣು ಮಕ್ಕಳೆಂದರೆ ವಿಶೇಷ ಪ್ರೀತಿ ಕ್ಲಿಷ್ಟ ಕಠೋರ ಸಮಸ್ಯೆಗಳಾದಂತಹ ಮಾಟ ಮಂತ್ರ,ಗಾಳಿ ವಾಮಾಚಾರ ಸಮಸ್ಯೆಗಳಿಂದ ತತ್ತರಿಸುವುವರಿಗೆ ಈ ಸನ್ನಿಧಿ ರಕ್ಷಾ ಕವಚವಾಗಿದೆ.ಭಕ್ತಿಯಿಂದ ಬೇಡುವವರಿಗೆ ಕೃಪೆ ಖಚಿತ.


ಪ್ರಿಯ ಓದುಗರೆ ಆಧುನಿಕ ಪ್ರಪಂಚದಲ್ಲಿ ದೇವರು ದಿಂಡರು ಎಂದರೆ ಮೂಗು ಮುರಿಯೋದು ಹೆಚ್ಚು ಆದರೆ ಅಂತಹ ವೈಚಾರಿಕ ತರ್ಕಕ್ಕೆ ಮೀರಿದ ದೈವ ಪವಾಡಗಳ ಈ ಮಹಾನ್ ಸಾತ್ವಿ ಬಳಿಯಲ್ಲಿ ಅಚ್ವರಿಯಂತೆ ನಡೆಯುತ್ತಿದೆ.ಎಂತಹ ಕಷ್ಟಗಳಿದ್ದರು ಇಲ್ಲಿ ಬಂದು ಪೂಜೆ ಮಾಡಿಸಿ ಹರಕೆ‌ ಹೊತ್ತರೆ ಪರಿಹಾರ ಶತಸಿದ್ದ ನಮ್ಮ ದೇಗುಲ ದರ್ಶನ ಕರ್ನಾಟಕ ತಂಡದಿಂದ ಇಂತಹ ಪವಾಡ ದೇಗುಲಗಳ ಮಾಹಿತಿ ಹಂಚುವ ಒಂದು ಸಣ್ಣ ಸೇವೆಯಷ್ಟೇ.ಈ ಜಗನ್ಮಾತೆ ಶಿಲೆಯ ರೂಪದಲ್ಲಿ ಬಲಗೈನಲ್ಲಿ ಖಡ್ಗ ಮತ್ತು ತ್ರಿಶೂಲ ,ಎಡಗೈನಲ್ಲಿ ಡಮರುಗ ಮತ್ತು ಅನ್ನದ ಪಾತ್ರೆ ಹಿಡಿದಿದ್ದಾಳೆ.ಈಕೆಯೂ ಮಕ್ಕಳ ಮಾತೆಯಾಗಿ ಸದಾ ಹೆಣ್ಣು ಮಕ್ಕಳ ಶ್ರೇಯಸಿಗಾಗಿ ತಪವನ್ನು ಮಾಡುತ್ತಿದ್ದಾಳೆ‌.ಸಾಕ್ಷಾತ್ ಪಾರ್ವತಿ ದೇವಿಯು ಶಾಂತ ಮೂರ್ತಿಯಾಗಿ ಹೇಗೆ ಅವತಾರ ಪಡೆಯುತ್ತಾಳೆ ಎಂಬ ರೋಚಕ ಪವಾಡದ ಕಥೆ ಹೇಳುತ್ತೇವೆ ಓದುತ್ತಾ ಸಾಗಿರಿ.
ಭಯಂಕರವಾದ ಕಾಡು,ಆ ಕಾಡಿನ ಸುತ್ತ ಹುಲಿಗಳ ಬೀಡಾಗಿದ್ದು ಸಿದ್ದರು ,ಋಷಿಮುನಿಗಳು ತಪವನ್ನು ಗೈಯುತ್ತಿರುವ ದಿವ್ಯ ಕ್ಷೇತ್ರ ತಾಣವಾಗಿರುತ್ತದೆ ಈ ಹುಲಿಯೂರು ದುರ್ಗ.ಇದೆ ಸ್ಥಳದಲ್ಲಿ ರುಂಡ ಮಾಲೆ ಧರಿಸಿ ಕಾಳಿ ಸ್ವರೂಪಿಯಾಗಿ ನರರನ್ನು(ಮನುಷ್ಯರನ್ನು)ತಿನ್ನುತ್ತಿದ್ದ ಈ ಮಹಾ ಮಾಯಿ.ಆದರೆ ಈಗ ಅದೆ ಭಕ್ತರ ಮಕ್ಕಳ ಪಾಲಿನ ಪ್ರೀತಿಯ ತಾಯಿಯಾಗಿ ಸರ್ವರನ್ನು ರಕ್ಷಿಸಲು ಸರ್ವವರ ಪ್ರದಾಯಿನಿಯಾಗಿದ್ದಾಳೆ.ಅಂತಹ ರೋಚಕ ಕಥೆ ಈ ಮುಂದಿದೆ.ಸಾಮಾಂತ ರಾಜ ಎಂಬ ಹುಲಿ ಪಟ್ಟಣವನ್ನು ಆಳುತ್ತಿದ್ದನು ಇವನು ತುಂಬಾ ಕ್ರೂರಿಯಾಗಿದ್ದು ಮನುಷ್ಯರಲ್ಲಿ ಹೆಣ್ಣುಮಕ್ಕಳನ್ನು ಕಾಮ ದೃಷ್ಟಿಯಿಂದ ಕಾಣುತ್ತಾ ವಯಸ್ಸಿಗೆ ಬಂದಂತಹ ಎಲ್ಲಾ ಹೆಣ್ಣು ಮಕ್ಕಳನ್ನು ಅತ್ಯಾಚಾರ ವೆಸಗಿ ನಿರ್ನಾಮ ಮಾಡುತ್ತಿದ್ದನು.ಒಮ್ಮೆ ಹುಲಿ ಪಟ್ಟಣವನ್ನು ಬಿಟ್ಟು ಸ್ವಲ್ಪ ದೂರ ಕ್ರಮಿಸಿ ಋಚಿ ತಪಸ್ವಿಗಳಿರುವ ಕ್ಷೇತ್ರವಾಗಿರುವಂಹ ಆಶ್ರಮಕ್ಕೆ ಬಂದಾಗ ಬಾಯಾರಿಕೆ ನೀಗಿಸಿಕೊಳ್ಳಲು‌ ನೀರನ್ನು ಕೇಳಲು ಹೋಗಿ ಋಷಿ ಮುನಿಯ ಪತ್ನಿಯನ್ನು ನೋಡಿ ಮೋಹಿತನಾಗಿ ಕೆಟ್ಟ ವರ್ತನೆ ನಡೆಸಲು ಮುಂದಾದಾಗ ಸಾಮಂತ ರಾಜನು ಮಹಾ ಪತಿವ್ರತಾ ಶಿರೋಮಣಿ ನಾಗಲಾಂಭಿಕೆಯನ್ನು ಸ್ವರ್ಶಿಸಿದಾಗ ರುಂಡಾ ದಾರುಣಿಯಾದ ಶ್ರೀ ಪಾರ್ವತಿ ದೇವಿಯನ್ನು ಮೊರೆ ಹೋದಾಗ ದೇವಿಯು ಪ್ರಸನ್ನಳಾಗಿ ನಾಗಾಲಾಂಭಿಕೆಯ ತದ್ರೂಪವನ್ನು ತಾಳಿ(ವೇಷದಾರಿಯಾಗಿ)ಸಾಮಂತ ರಾಜನ ಹಿಂದೆ ಹೋಗುತ್ತಾ ಕಾಡಿನ ಮಧ್ಯೆಯಲ್ಲಿ ಸಾಮಂತ ರಾಜ ಹಿಂದೆ ತಿರುಗಿ ನೋಡಿದಾಗ ಕಾಳಿ ಸ್ವರೂಪಿಯಾಗಿ ಅನೇಕ ಬಗೆಯ ಕೈಗಳನ್ನು ಹೊಂದುತ್ತಾ ತ್ರಿಶೂಲ ಹಿಡಿದು ರುಂಡ ಮಾಲೆಯನ್ನು ಧರಿಸಿ ಆತನನ್ನು ಸಂಹರಿಸುತ್ತಾಳೆ.

ಆತನ ರಕ್ತ ಕುಡಿದು ತಲೆಯನ್ನು ಬೇಯಿಸಿ ತಿಂದಳು ನಂತರ ನರಭಕ್ಷಕಿಯಾಗಿ,ಉಗ್ರ ಸ್ವರೂಪಿಣಿಯಾಗಿಬಿಟ್ಟಳು ಪಾರ್ವತಿ ದೇವಿ.ಈಗಲೂ ಸಹ ಈ ಕ್ಷೇತ್ರದಲ್ಲಿ ಸತ್ತವರನ್ನು ಸುಟ್ಟಾಗ ತಲೆ ಸಿಡಿಯುವುದಿಲ್ಲ ಮತ್ತು ಎಲ್ಲಾ ಜನರನ್ನು ಭಯ ಬೀಳಿಸುತ್ತಾ ಉಗ್ರವಾಗಿ ಜನರನ್ನು ಭಕ್ಷಿಸುತ್ತಾ ಇದ್ದಾಗ ಇದನ್ನು ನೋಡಿದ ತ್ರಿಮೂರ್ತಿಗಳಾದ ಬ್ರಹ್ಮ ,ವಿಷ್ಣು, ಮಹೇಶ್ವರ ಸೇರಿ ಈಶ್ವರ ಅಂಶದಿಂದ ಸಿದ್ದಲಿಂಗೇಶ್ವರನನ್ನು ಸೃಷ್ಟಿಸಿ ಆಕೆಯ ಬಳಿ ಹಿಂದೆಯಿಂದ ಹೋಗಿ ಆತ್ಮ ಲಿಂಗವನ್ನು ಕೊರಳಿಗೆ ದಾರಣೆ ಮಾಡಲು ಸೂಚಿಸುತ್ತಾರೆ.ನಂತರ ಈ ಕಾರ್ಯ ಯಶಸ್ವಿಯಾಗಿ ಸಾಗುತ್ತದೆ.ಆಗ ಈ ತಾಯಿ ಹೆಣವನ್ನು ತಿನ್ನುತ್ತಿದ್ದಾಗ ಆತ್ಮ‌ಲಿಂಗವನ್ನು ತನ್ನ ಕೊರಳಲ್ಲಿ ನೋಡಿ ಯಾರಿದನ್ನು ಹಾಕಿದವರು ಎಂದು ಕಿರುಚಿ ರೌದ್ರ ರೂಪವನ್ನು ‌ನೋಡಲು ಆಕೆಯಲ್ಲಿ ಸಿದ್ದಲಿಂಗೇಶ್ವರನು ಹಿಂದೆ ನಡೆದಂತಹ ವಿಚಾರವನ್ನು ತಿಳಿಸಿದಾಗ ರೌದ್ರ ರೂಪವನ್ನು ಉಗ್ರ ಸ್ವರೂಪವನ್ನು ತ್ಯಜಿಸಿ ಮುಂದೆ ಸಸ್ಯಹಾರಿಯಾಗಿ ಭಕ್ತರನ್ನು ಕಾಯುತ್ತಾ ಕಲಿಯುಗದ ಪ್ರತ್ಯಕ್ಷ ಕಾಳಿ ದೇವತೆ ಯಂತ್ರ ಮಂತ್ರಗಳ ಸ್ವರೂಪಿಣಿ ಭಯಂಕರ ರೂಪದಾರಿಣಿಯಾಗಿ,ಶಕ್ತಿದೇವತೆಯಾಗಿ ಭಕ್ತರ ಹರಕೆಗಳನ್ನು ಚಾಚು ತಪ್ಪದೇ ನೆರವೇರಿಸುವಂತಹ ಹುಲಿಯೂರು ಅಮ್ಮನವರು ಆಗಿದ್ದಾರೆ.ಇಲ್ಲಿಗೆ ಬರುವ ಭಕ್ತರು ಎಂದಿಗೂ ಬರಗೈನಲ್ಲಿ ಹೋಗಿಲ್ಲ ತಾಯಿಯ ಪವಾಡಗಳು ಇಂದಿಗೂ ನಡೆಯುತ್ತಿವೆ.ದೇವಿಯನ್ನು ಆರಾಧಿಸುವ ಪ್ರತಿ ಭಕ್ತರ ಮನದಲ್ಲೂ ದೇವಿ ನೆಲೆಯಾಗಿದ್ದಾಳೆ.ಒಮ್ಮೆ ಕ್ಷೇತ್ರಕ್ಕೆ ಹೋಗಿ ಬನ್ನಿ ಶುಭಫಲ ಖಚಿತ.
ದೇವಿ ದೇಗುಲಕ್ಕೆ ಹೋಗುವ ಮಾರ್ಗ-ಹುಲಿಯೂರುದುರ್ಗಕುಣಿಗಲ್ ತಾಲೂಕು,ತುಮಕೂರು ಜಿಲ್ಲೆ.
ಹುಲಿಯೂರು ದುರ್ಗವು ಬೆಂಗಳೂರಿನಿಂದ 94 KM ಆಗುತ್ತದೆ.ಬಸ್ಸುಗಳ ಅನೂಕೂಲವಿದೆ.
ಮೈಸೂರಿನಿಂದ 92KM ದೂರವಿದೆ.
ಶ್ರೀ ಹುಲಿಯೂರಮ್ಮ ದೇವಿಗೆ ವಿಶೇಷ ಆರತಿ ದರ್ಶನ ಪಡೆದು ಪುನೀತರಾಗಿರಿ👇👇👇

ಮತ್ತೊಂದು ವಿಶೇಷ ಏನೆಂದರೆ ಹುಲಿದುರ್ಗದಲ್ಲಿ ತಾಯಿಯ ದರ್ಶನವಾಗುತ್ತದೆ.ಶಾಸ್ತ್ರ ಅಥವಾ ಮುಂತಾದ ಪ್ರಶ್ನೆಗಳನ್ನು ಕೇಳಲು ಹುಲಿಯೂರುದುರ್ಗಕ್ಕೆ ಹತ್ತಿರವಿರುವ ಹೋಸಪೇಟೆಗೆ‌ ಹೋಗಬೇಕು.
ತಪ್ಪದೇ ನಿಮ್ಮೆಲ್ಲಾ ಫೇಸ್ಬುಕ್ ಗುಂಪುಗಳಿಗೆ ಶೇರ್ ಮಾಡಿ,ಕರ್ನಾಟಕ ದೇಗುಲಗಳ ಮಾಹಿತಿ ಹಂಚುವ ಕೆಲಸಕ್ಕೆ ಕೈ ಜೋಡಿಸಿ.
ಲೇಖನದ ಲಿಂಕನ್ಜು ಮಾತ್ರ ಶೇರ್ ಮಾಡಿ,ಲೇಖನವನ್ನು ಕಾಪಿ ಅಥವಾ ಕದಿಯುವುದು ಕಾನೂನು ಅಪರಾಧಕ್ಕೆ ಮುಂದಾಗುತ್ತದೆ.
ದುಷ್ಟ ಶಕ್ರಿಗಳಿಂದ ಮುಕ್ತಿ ಹೊಂದಲು ,ಧನಾತ್ಮಕ ಶಕ್ತಿಗಾಗಿ,ಕಾರ್ಯ ಸಿದ್ದಿಗಾಗಿ.ಶ್ರೀ ಪಂಚಮುಖಿ ಹನುಮ ಕವಚ ಧರಿಸಿದರೆ ಶುಭಪಲ ಬೇಕಾದವರು ಸಂಪರ್ಕಿಸಿ👇👇👇


ಹುಲಿಯೂರು ದುರ್ಗದಲ್ಲಿ ನಡೆದ ಹುಲಿಯೂರಮ್ಮ‌ದೇವಿಯ ಹಬ್ಬದ ಚಿತ್ರಣ ನೋಡಿ👇👇👇👇

ದೇವಿಯು ಸಕಲರಿಗೂ ಆಶಿರ್ವದಿಸಲಿ🙏🙏
ದೇಗುಲ ದರ್ಶನ ಕರ್ನಾಟಕ ಫೇಸ್ಬುಕ್ ಗ್ರೂಪ್ ಸೇರಲು ಇಲ್ಲಿ ಒತ್ತಿ(ಕ್ಲಿಕ್ ಮಾಡಿ)📲📲


ದೇಗುಲ ದರ್ಶನ ಟೆಲಿಗ್ರಾಮ್ ಗುಂಪಿಗೆ ಸೇರಲು ಇಲ್ಲಿ ಒತ್ತಿರಿ📲📎


ದೇಗುಲದ ಬಗ್ಗೆ ಮಾಹಿತಿ ಬೇಕೆಂದರೆ ಸಂಪರ್ಕಿಸಿ 9110299372.