ಗುರುರಾಯರ ಈ ಶಕ್ತಿಶಾಲಿ ಮಂತ್ರ ಪಠಿಸಿ ನಿಮ್ಮ ಜೀವನದಲ್ಲಿ ಬದಲಾವಣೆ ಆಗಿಲ್ಲವೆಂದರೆ ಕೇಳಿ…!ಮಂತ್ರ ಪವಾಡ..!


ದೇಗುಲ ದರ್ಶನ ಕರ್ನಾಟಕ ತಂಡದಿಂದ ಅತ್ಯುತ್ತಮ ದೈವ ಮಾಹಿತಿ ನಿಮಗಾಗಿ ಓದು ತಪ್ಪದೇ ಶೇರ್ ಮಾಡಿ.ಶ್ರೀ ಗುರುರಾಯರ ನೆನೆಯುತ್ತಾ ಓದುತ್ತಾ ಸಾಗಿರಿ.ರಾಘವೇಂದ್ರ ಸ್ತೋತ್ರ ಎಲ್ಲದಕ್ಕೂ ಪರಿಹಾರವಾಗಿರುವ ಸ್ತೋತ್ರ. ರಾಯರ ಸ್ತೋತ್ರ ಅಪ್ಪಣ್ಣಾಚಾರ್ಯರಿಂದ ಹೊರಬಂದದ್ದು ಅವರ ನಿರ್ಮಲ ಮನಸ್ಸಿನಿಂದ. ಗುರುಗಳು ವೃಂದಾವನಸ್ಥರಾಗುತ್ತಿದ್ದಾರೆ ಎಂಬ ಸುದ್ದಿ ತಿಳಿದು ಒಡನೆಯೇ ಬಳಿಗೆ ಧಾವಿಸುತ್ತಿದ್ದಾಗ ಅವರ ಬಾಯಿಂದ ಹೋರಾಟ ಭಾವ ಪುಷ್ಪವೇ “ಶ್ರೀ ರಾಯರ ಸ್ತೋತ್ರ”. ಇದು ವೇದಗಳ ಸಾರ , ಇದು ರಾಘವೇಂದ್ರಗುರುಗಳ-ವಾಯುದೇವರ-ಸರ್ವೋತ್ತಮ ಶ್ರೀಹರಿಯ ಪರವಾದ ಸ್ತೋತ್ರ. ಇದರಲ್ಲಿ ದೊಡ್ಡ ಚಿಂತನೆಗಳೇ ಅಡಗಿವೆ. ಅದಕ್ಕೆಲ್ಲ ರಾಯರು ಒತ್ತಿದ ಮುದ್ರೆ ” ಸಾಕ್ಷಿ ಹಯಾಸ್ಯೋsತ್ರಹೀ ” ಎಂಬುದೆ ಸಾಕ್ಷಿ. ರಾಯರ ಸ್ತೋತ್ರ ಬಹು ಬೇಗನೆ ಒಲಿಯುವ, ಅಭೀಷ್ಟಪ್ರದ ಸ್ತೋತ್ರ ಎಂಬುದು ಇದಕ್ಕೆನೆ. ಇಲ್ಲಿ ರಾಯರ ಮಾತ್ರವಲ್ಲ ಅವರ ಅಂತರ್ಯಾಮಿಯಾದ ಮಧ್ವರೂ ಮತ್ತು ಮಧ್ವವಲ್ಲಭನಾದ ಶ್ರೀಹರಿಯ ಸ್ತುತಿ ಕೂಡ ಹೌದು. ರಾಘವೇಂದ್ರ ಎಂದರೆ “ರಘೋ: ಗೊತ್ರಾಪತ್ಯಂ ಪುಮಾನ್ ರಾಘವ: , ರಾಘವೇಷು ಇಂದ್ರ ರಾಘವೇಂದ್ರ: = ಶ್ರೀರಾಮಃ” ಶ್ರೀಹರಿಯಂತೆ , “ರಾಘವಃ ( ಶ್ರೀರಾಮಃ) ಇಂದ್ರಃ ಯಸ್ಯ = ತಸ್ಯ ಶ್ರೀಮದಾಚಾರ್ಯಸ್ಯ , ವಾಯುದೆವಸ್ಯ” ಅಂದರೆ ಆ ರಾಮನು ಯಾರಿಗೆ ಇಂದ್ರನೋ ? ಅವರೇ ರಾಘವೇಂದ್ರ ಅರ್ಥಾತ್ ಶ್ರೀಮದಾಚಾರ್ಯರು ಮತ್ತು ಸುಧೀಂದ್ರ ತೀರ್ಥ ಶ್ರೀಪಾದರು ಇತ್ತ ಅನ್ವರ್ಥಕ ನಾಮದಿಂದಲೂ ರಾಯರು ರಾಘವೇಂದ್ರರು , ಮತ್ತು ಶ್ರೀಮದಾಚಾರ್ಯರಂತೆ ಇವರಿಗೂ ಅವರ ಉಪಾಸ್ಯ ಮೂರ್ತಿ ಶ್ರೀಮೂಲ ರಾಮಚಂದ್ರಪ್ರಭುವೇ , ಪ್ರಭುವಾದಾರಿಂದ ಅಂಕಿತದಿಂದಲೂ ಅವರು ರಾಘವೇಂದ್ರರೇ ಆಗಿದ್ದಾರೆ. ಇಂತದೊಂದು ಅದ್ಭುತ ಚಿಂತನೆ ರಾಯರ ಸ್ತೋತ್ರಕ್ಕೆ ಸಾಧ್ಯ. ಈ ಸ್ತೋತ್ರದಲ್ಲಿ “ತವ ಸಂಕೀರ್ತನಂ ವೇದಶಾಸ್ತ್ರಾರ್ಥ ಜ್ಞಾನ ಸಿದ್ಧಯೇ” ಎಂಬುದು ಗುರುಸ್ತೋತ್ರಕಾರರಾದ , ರಾಘವೇಂದ್ರ ಗುರುಗಳ ಅಂತರಂಗ ಭಕ್ತರಾದ, ಏಕಾಂತ ಭಕ್ತರಾದ ಅಪ್ಪಣ್ಣಾಚಾರ್ಯರ ಮಾತು.. ಇದೂ ಎಷ್ಟು ಅರ್ಥ ಗರ್ಭಿತವಾದುದು ?? ಈಗ ನಾವು ಏನು ಮಾಡುತ್ತಿದ್ದೇವೆ ? ರಾಯರ ಬಗೆಗೆ ಓದುತ್ತಿದ್ದೇವೆ ಅರ್ಥಾತ್ ಂದು ರೀತಿಯಲ್ಲಿ ಸಂಕೀರ್ತನೆಯೇ ಇದರಲ್ಲಿ ಒಂದು ಸಂದೇಶ ಕೂಡ ಕಂಡೆವು ಅದು ಶಾಸ್ತ್ರವಲ್ಲವೇ ?? ಅಲ್ಲಿಗೆ ಸಿದ್ಧವಾಯಿತು “ತವ ಸಂಕೀರ್ತನಂ ವೇದಶಾಸ್ತ್ರಾರ್ಥ ಜ್ಞಾನ ಸಿದ್ಧಯೇ” ಎಂಬುದು ಎಂತಹ ಅದ್ಭುತ ಈ ಮಾತು ??


ರಾಘವೇಂದ್ರ ಗುರುಸಾರ್ವಭೌಮರ ಚರಿತ್ರೆಯೇ ಒಂದು ದೊಡ್ಡ ಸಂದೇಶ ಕೊಡುವ ಉಪನಿಷತ್ತಿನಂತೆ ಇದೆ. ಚರಿತ್ರೆ ಓದುವದು ತಿಳಿಯುವದು ,ಹೇಳುವುದು ,ಕೇಳುವುದು ಇವೆಲ್ಲ ಒಂದರ್ಥದಲ್ಲಿ ಸಂಕೀರ್ತನೆಯೇ ಅಲ್ಲವೇ ?? ರಾಯರ ಚರಿತ್ರೆ ಶಾಸ್ತ್ರದ ಸಂದೇಶವನ್ನು ರವಾನಿಸುತ್ತದೆ ಅದ್ದರಿಂದ ಅದನ್ನು ಸಂಕೀರ್ತನೆ ಮಾಡುವದರಿಂದ ಶಾಸ್ತ್ರ ಜ್ಞಾನ ಸಿದ್ಧಿಸುತ್ತದೆ. ಅಲ್ಲಿಗೆ “ತವ ಸಂಕೀರ್ತನಂ ವೇದಶಾಸ್ತ್ರಾರ್ಥ ಜ್ಞಾನ ಸಿದ್ಧಯೇ” ಎಂಬುದು ಸಿದ್ಧ. ಈಗಾಗಲೇ ಹೇಳಿದಂತೆ ‘ರಾಯರ ಸ್ತೋತ್ರವನ್ನು ಹರಿ ಗುರುಗಳ ಪರವಾಗಿ ಅರ್ಥೈಸಬಹುದು ಇದು ಉಚಿತ ಕೂಡ’. ಸಕಲ ಶಬ್ದಾರ್ಥ ಪ್ರತಿಪಾದ್ಯನು ನಾರಾಯಣ ಎಂದು ಶಾಸ್ತ್ರ ಹೇಳುವದರಿಂದ ಇಲ್ಲಿಯೂ ಶಾಸ್ತ್ರ ವಿಚಾರ ಬಂತಾದ್ದರಿಂದ “ತವ ಸಂಕೀರ್ತನಂ ವೇದಶಾಸ್ತ್ರಾರ್ಥ ಜ್ಞಾನ ಸಿದ್ಧಯೇ” ಎಂಬುದು ಸಿದ್ಧ.
ಇನ್ನು ಸಾಮಾನ್ಯ ಅರ್ಥದಲ್ಲಿ ” ಓಂ ಶ್ರೀ ರಾಘವೇಂದ್ರಾಯ ನಮಃ” ಎಂದರೂ ಕೂಡ ರಾಘವೇಂದ್ರ ಗುರುಗಳು ಶಾಸ್ತ್ರಜ್ಞಾನ ಕೊಡುತ್ತಾರೆ. ಅದ್ದರಿಂದ ಹೇಗೆ ಚಿಂತನ ಮಾಡಿದರೂ “ತವ ಸಂಕೀರ್ತನಂ ವೇದಶಾಸ್ತ್ರಾರ್ಥ ಜ್ಞಾನ ಸಿದ್ಧಯೇ” ಎಂಬುದು ಸಿದ್ಧವೇ ಆಗಿದೆ.. ಅವರ ವೈಶಿಷ್ಟ್ಯದ ಬಗೆಗಿನ ಈ ಲೇಖನ ಓದುವದರಿಂದಲೂ ಅವರ ಸಂಕೀರ್ತನೆ ಆಗುವದರಿಂದ ಜ್ಞಾನ ಸಿದ್ಧಿ ಆಗುವದು ನಿಸ್ಸಂಶಯ. ಅಂತಹ ಪರಮ ಕಾರುಣೀ ರಾಘವೇಂದ್ರ ತೀರ್ಥ ಗುರುಸರ್ವಭೌಮುರ್ ನಮ್ಮನ್ನು ಉದ್ಧರಿಸಲಿ.
।। ಭೂಯಿಷ್ಟಾಂತೆ ನಮ ಉಕ್ತಿಂ ವಿಧೇಮ ।।
।। ಸರ್ವೋತ್ತಮಃ ಶ್ರೀಶಃ ಮೂಲ ರಾಮಃ ಪ್ರಸೀದತು ||
ತಪ್ಪದೇ ನಿಮ್ಮೆಲ್ಲಾ ಫೇಸ್ಬುಕ್ ಗುಂಪುಗಳಿಗೆ ಶೇರ್ ಮಾಡಿ.ಸಕಲರಿಗೂ ರಾಯರ ಅನುಗ್ರಹವಾಗಲಿ.
ದುಷ್ಟ ಶಕ್ತಿಗಳಿಂದ ಮುಕ್ತಿ ಹೊಂದಲು,ಧನಾತ್ಮಕ ಶಕ್ತಿಗಾಗಿ,ಹಣಕಾಸು,ಆರೋಗ್ಯ ಸಮಸ್ಯೆಗಳಿಗೆ,ಕಾರ್ಯ ಸಿದ್ದಿಗಾಗಿ ಶ್ರೀ ಪಂಚಮುಖಿ ಹನುಮನ‌ ಕವಚ ಧರಿಸಿದರೆ ಶುಭಫಲ👇👇 ಬೇಕಾದವರು ಸಂಪರ್ಕಿಸಿ👇👇


ರಾಯಬಾರೊ ತಂದೆತಾಯಿ ಬಾರೊ
ನಮ್ಮ ಕಾಯಿ ಬಾರೊ
ಮಾಯಿಗಳ ಮರ್ದಿಸಿದ ರಾಘವೇಂದ್ರ || ಪ ||
ವಂದಿಪ ಜನರಿಗೆ ಮಂದಾರ ತರುವಂತೆ
ಕುಂದದಭೀಷ್ಟೆಯ ಸಲಿಸುತಿಪ್ಪ ಸುರಮುನಿ
ಮಂದನ ಮತಿಗೆ ರಾಘವೇಂದ್ರ || ೧ ||
ಭಾಸುರಚರಿತನೆ ಭೂಸುರವಂದ್ಯನೆ
ಶ್ರೀಸುಧೀಂದ್ರಾರ್ಯರ ವರಪುತ್ರನೆನಿಸಿದ
ದೇಶಿಕರೊಡೆಯ ರಾಘವೇಂದ್ರ || ೨ ||
ರಾಮಪದಸರಸೀರುಹಭೃಂಗ ಕೃಪಾಂಗ
ಭ್ರಾಮಕಜನರ ಮತಭಂಗ ಮಾಡಿದ
ಧೀಮಂತರೊಡೆಯನೆ ರಾಘವೇಂದ್ರ || ೩ ||
ಆರು ಮೂರೇಳು ನಾಲ್ಕೆಂಟು ಗ್ರಂಥಸಾರಾರ್ಥ
ತೋರಿಸಿದೆ ಸರ್ವರಿಗೆ ಸರ್ವಜ್ಞ
ಸೂರಿಗಳರಸನೆ ರಾಘವೇಂದ್ರ || ೪ ||
ಭೂತಳನಾಥನ ಭೀತಿಯ ಬಿಡಿಸಿದೆ
ಪ್ರೇತತ್ವ ಕಳೆದೆ ಮಹಿಷಿಯ ಶ್ರೀಜಗ-
ನ್ನಾಥವಿಠಲನ ಪ್ರೀತಿಪಾತ್ರ ರಾಘವೇಂದ್ರ || ೫ ||