ಎಂತಹ ದುಷ್ಟ ಶಕ್ತಿ ಇದ್ದರೂ,ಎಂತಹ ಕಷ್ಟಗಳಿದ್ದರೂ ಕಾಪಾಡುತ್ತಾಳೆ ಈ ಶಕ್ತಿಶಾಲಿ ದೇವಿ..!ನಿಮ್ಮ ಮೈ ಜುಮ್ಮೆನಿಸುವ ಪವಾಡ ಇಲ್ಲಿದೆ ನೋಡಿ..!ದೇವಿ ಪವಾಡ


ದೇಗುಲ ದರ್ಶನ ಕರ್ನಾಟಕ ತಂಡದಿಂದ ಅತ್ತುತ್ತಮ ದೈವ ಮಾಹಿತಿ ನಿಮಗಾಗಿ ಓದಿ ತಪ್ಪದೇ ಶೇರ್ ಮಾಡಿ.ಕರ್ನಾಟಕದಲ್ಲಿನ ಅನೇಕ ದೇವರ ಪವಾಡಗಳನ್ನು ನಾವು ನಿಮ್ಮ ಮುಂದೆ ಇಡುತ್ತಾ ಬಂದಿದ್ದೇವೆ.ಇಂದು ನೀವು ಕೇಳುವ ನೋಡುವ ದೇವಿಯ ಪವಾಡ ರೋಮಾಂಚನಕಾರಿಯಾಗಿದೆ.ಭಕ್ತರನ್ನು ಕಾಪಾಡುತ್ತಾ ನೆಲೆನಿಂತಿರುವ ಮಹಾಮಹಿಮೆಯ ಬಗ್ಗೆ ತಿಳಿಯೋಣ ಓದುತ್ತಾ ಸಾಗಿರಿ.ಕಾಣದ ಶಕ್ತಿಯೊಂದು ನಮ್ಮೆಲ್ಲರನ್ನು ಸಲಹುತ್ತಿದೆ ಅಂತಹ ಒಂದು ಶಕ್ತಿಯೆ ನಮ್ಮ‌ ಈ ಅಮ್ಮ.
ಹಲವಾರು ಜನರಿಗೆ ಒಳಿತನ್ನು ಮಾಡಿರುವ ಮತ್ತು ಮಾಡುತ್ತಲಿರುವ ಆ ದೇವಿಯ ಬಗ್ಗೆ ತಿಳಿಯೊಣ ಬನ್ನಿ.
ಒಂದು ದಿನ‌ ಒಬ್ಬ ಯುವಕನಿಗೆ ಅಪಘಾತ ಆಯಿತು ಅದು ಬಸ್ಸಿಗೆ ಡಿಕ್ಕಿ ಹೊಡೆದ ಪರಿಣಾಮ ಆ ಯುವಕನ ಗಂಟಲಿಗೆ ಬಸ್ಸಿನ ಕಬ್ಬಿಣದ ರಾಡು ಚುಚ್ಚಿತು ಇದರಿಂದ ಪ್ರಜ್ಞೆ ತಪ್ಪಿ ಬಿದ್ದರು ಇವರನ್ನು ಆಸ್ಪತ್ರೆಗೆ ಸೇರಿಸಲಾಯಿತು. ವೈದ್ಯರು ಇವರು ಬದುಕುವುದಿಲ್ಲ ತುಂಬಾ ರಕ್ತ ಹೋಗಿದೆ ಎಂದು ಬಿಟ್ಟರು ಇದರಿಂದ ಕಂಗಲಾದ ಕುಟುಂಬ ಮೊರೆ ಹೋಗಿದ್ದು ಅಮ್ಮನ ಹತ್ತಿರ ಆಗ ಅಮ್ಮ ಅಭಯ ನೀಡಿ ಎನು ಆಗುವುದಿಲ್ಲ ಎಂದಳು ಅಲ್ಲಿ ಹೋಗಿ ಬಂದ ಮರುದಿನವೆ ಬದುಕಲು ಸಾಧ್ಯವಿಲ್ಲ ಎಂದಿದ್ದ ವೈದ್ಯಕೀಯ ತಂಡ ನಿಮ್ಮ ಮಗ ಬದುಕುತ್ತರೆ ಅವರಿಗೆ ಎನು ಆಗೊಲ್ಲ‌ ಎಂದರು. ಅಮ್ಮನ ಆಶಿರ್ವಾದದಿಂದ ಇಂದು ಬದುಕಿದ್ದಾರೆ. ಅಚ್ಚರಿ ರೀತಿಯಲ್ಲಿ ಪಾರು ಮಾಡಿದ ಆ ದೇವಿಯೆ ಮಸಣಿಕಮ್ಮ ಅಥವಾ ಪಿರಿಯಾಪಟ್ಟಣದಮ್ಮ.


ಇತಿಹಾಸ: ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಹೆಣ್ಣು ಮಗುವೊಂದು ತುಂಬಾ ದೈವಿಕ ಶಕ್ತಿ ಹೊಂದಿರುವ ಅದ್ಬುತಗಳನ್ನು ಮಾಡುವ ಮಹಾ ಮಹಿಮೆ. ಏಳು ವರ್ಷದ ಹೆಣ್ಣು ಮಗು ಆ ಮಗುವಿನ ಹೆಸರು ಗಾಯಿತ್ರಿ ದೇವಿ
ಮಗುವು ಶಿವನ ಪರಮ ಭಕ್ತೆ. ಶಿವನ ಪೂಜೆಗೆ ಒಂದು ದಿನ ಗೆಳೆಯರ ಜೊತೆಗೂಡಿ ನದಿಯ ದಡಕ್ಕೆ ಹೋಗುತ್ತಾಳೆ ಆ ಜಾಗವು ಬ್ರಾಹ್ಮಣರು ಪಿತೃ ಕಾರ್ಯ ಮಾಡುವ ಸ್ಥಳ ಹಾಗಾಗಿ ಅಲ್ಲಿಗೆ ಯಾರು ಮಕ್ಕಳನ್ನು ಕಳುಹಿಸುತ್ತಿರಲಿಲ್ಲ ಆದರೆ ತಂದೆ ತಾಯಿ ಕಣ್ತಪ್ಪಿಸಿ ಮಕ್ಕಳು ಆ ಜಾಗಕ್ಕೆ ಹೋಗುತ್ತಿದ್ದರು. ಗಾಯತ್ರಿ ದೇವಿಯು ತುಂಬೆ ಹೂವನ್ನು ಕೀಳಲು ಹೋಗಿ ಸಂಜೆ ಆದರು ಮನೆಗೆ ಬರಲಿಲ್ಲ ಇದರಿಂದ ಭಯಗೊಂಡ ತಂದೆ ತಾಯಿ ಅವಳನ್ನು ಹುಡುಕಲು ಹೊರಟರು ಆದರೆ ಗಾಯಿತ್ರಿ ಮಾತ್ರ ಪತ್ತೆ ಆಗಲಿಲ್ಲ ಆಗ ನದಿ ದಡಕ್ಕೆ ಊರಿನವರೆಲ್ಲ ಹೋಗಿ ಅವಳ ಹೆಸರಿಡಿದು ಜೊರಾಗಿ ಕೂಗಿದರು ಆಗ ಧಗ ಧಗನೆ ಉರಿಯಿತ್ತಿದ್ದ ಇಟ್ಟಿಗೆ ಗೂಡಿನಿಂದ ಮಗುವಿನ ಧ್ವನಿ ಕೇಳಿತು ಅಮ್ಮ‌ ನಾನು ಇಲ್ಲಿ ಇದ್ದಿನಿ ಅಂತ ಆಗ ಅವರ ತಂದೆ ತಾಯಿ ಅಲ್ಲಿಂದ ಬಂದು ಬಿಡು ಎಂದು ಕರೆದಾಗ ಮಗುವು ನಾನು ಬರುವುದಿಲ್ಲ ಜನರ ಒಳಿತಿಗಾಗಿ ಇಲ್ಲೆ ಇರುವೆ ಎನ್ನುತ್ತದೆ ಕರೆದರು ಮಗಳು ಬರಲಿಲ್ಲ ಎಂದು ಕುಪಿತಗೊಂಡ ಅವಳ ತಂದೆ ಮತ್ತೆಂದು ಬರಬೇಡ ನಮ್ಮ‌ ಮನೆಗೆ ಎಂದು ಅಲ್ಲಿಂದ ಬಂದು ಬಿಡುತ್ತಾರೆ. ಇದಾದ ಮರುದಿನ ಆ ಇಟ್ಟಿಗೆ ಗೂಡನ್ನು ಹೊಡೆದು ನೋಡಿದಾಗ ಅಲ್ಲಿ ಅಚ್ಚರಿ ಕಾದಿತ್ತು ಆ ಅಚ್ಚರಿಯೆ ಮಗುವು ವಿಗ್ರಹ ರೂಪದಲ್ಲಿ ಇದ್ದದ್ದು. ಸ್ಮಶಾನದಲ್ಲಿ ನೆಲೆಯೂರಿದ ಮಹಾ ತಾಯಿಗೆ ಮಸಣಿಕಮ್ಮ ಎಂದು ಹೆಸರು ಬಂತು.‌ ಅಥವಾ ಪಿರಿಯಾಪಟ್ಟಣದಮ್ಮ‌ ಎಂದು ಕರೆಯುತ್ತಾರೆ.
ಅಮ್ಮ‌ನ ಬಳಿ ಬಂದವರು ಯಾರು ನಿರಾಸೆಯಿಂದ ಹಿಂದಿರುಗಿಲ್ಲ‌ ತಾಯಿಯ ಮಹಿಮೆ ಅಪಾರ ಅವಳನ್ನು ನಂಬಿದ ಭಕ್ತರು ಇಂದು ಕೋಟ್ಯಾಧಿಪತಿಗಳಾಗಿದ್ದರೆ, ವಿವಾಹ ಇಲ್ಲದವರಿಗೆ ವಿವಾಹಭಾಗ್ಯ , ಸಂತಾನ ಇಲ್ಲದವರಿಗೆ ಸಂತಾನ ಭಾಗ್ಯ ಹೀಗೆ ಭಕ್ತರ ಬಯಕೆಗಳನ್ನು ಇಡೇರುಸುತ್ತಾ ಮತ್ತು ಇಡೇರಿಸುತ್ತಿರುವ ಅಮ್ಮನ ಸನ್ನಿಧಾನಕ್ಕೆ ಜೀವನದಲ್ಲಿ ಒಮ್ಮೆ ಆದರೂ ಭೇಟಿ ನೀಡಲೆಬೇಕು.
ನಿಮ್ಮ ಕಷ್ಟಗಳು ದೂರಾಗಲು ದೇವಿ ದೇವಸ್ಥಾನ ಕ್ಕೆ ಬೇಗ ಭೇಟಿ ನೀಡಿ ಅವಳ ಕೃಪೆಗೆ ಪಾತ್ರರಾಗಿ.
ಈ ತಾಯಿ ಇರುವುದು ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನಲ್ಲಿ.


ದೇಗುಲ ದರ್ಶನ ಕರ್ನಾಟಕ
ಶ್ರೀ ಮಸಣಿಕಮ್ಮ ಪಿರಿಯಾಪಟ್ಟಣದ ಹಿರೀ ದೇವತೆಯಾಗಿದ್ದು ಉಜ್ಜಯಿನೀ ದೇಶದ ಬಿಜ್ಜಳ ರಾಜನ 7 ಜನ ಹೆಣ್ಣುಮಕ್ಕಳಲ್ಲಿ ಹಿರಿಯವಳಾಗಿದ್ದು ಚಾಮುಂಡಿ ಕಿರಿಯವಳೆಂಬ ಪ್ರತೀತಿಯಿದೆ. ಈಕೆ ಪಿರಿಯಾಪಟ್ಟಣದ ಹಿರಿದೇವತೆ. ಚೆಂಗಾಳ್ವ ರಾಜ್ಯ ದೇವತೆ, ಇಷ್ಟದೇವತೆ, ಮನೆದೇವರು ಆಗಿದ್ದು, ಉರಿಮಸಣಿ, ಕೊಡಗಿನ ಮಮ್ಮಾಯಿ ಎಂಬ ಹೆಸರಿದ್ದು ಚೆಂಗಾಳ್ವ ಪ್ರಭುಗಳ ಕುಲದೇವತೆಯಾಗಿದ್ದು ಈಕೆ ಸ್ಮಶಾನದೇವಿಯೂ ಆಗಿದ್ದು, ಮೂಲತ: ಬ್ರಾಹ್ಮಣ ಕುವರಿಯಾಗಿದ್ದಳೆಂದು ತಿಳಿದು ಬರುತ್ತದೆ.
ಪಿರಿಯಾಪಟ್ಟಣದ ಮಸಣಿಕಮ್ಮ ದೇವಸ್ಥಾನವು ತುಮಕೂರು ಹಾಸನ ಕೊಡಗು, ಮೈಸೂರು ಮಂಡ್ಯ ಜಿಲ್ಲೆಗಳಿಂದ ಮತ್ತು ನೆರೆ ರಾಜ್ಯ ಕೇರಳ ಮುಂತಾದ ಸ್ಥಳಗಳ ಭಕ್ತಾದಿಗಳಿಗೆ ಒಲಿದ ದೇವತೆಯಾದ, ಅವರುಗಳ ಮನೋಕಾಮನೆಗಳನ್ನು ಈಡೇರಿಸುವ ದೇವತೆಯಾದ್ದರಿಂದ ದೂರದೃಷ್ಟಿಯುಳ್ಳ ಶ್ರೀ ಮಸಣಿಕಮ್ಮ ದೆವ್ವಗಳ ಕಾಟವನ್ನು ತಪ್ಪಿಸುವ ದೇವತೆಯಾಗಿದ್ದಾಳೆ.
ದೇವಾಲಯದ ದರ್ಶನ ವೇಳೆ – ಬೆಳಿಗ್ಗೆ 6:00 ರಿಂದ ರಾತ್ರಿ 8:00 ಘಂಟೆಯವರೆಗೆ ನವರಾತ್ರಿ ಉತ್ಸವ – ಅಕ್ಟೋಬರ್ ತಿಂಗಳಿನಲ್ಲಿ ನಡೆಯುತ್ತದೆ. ರಥೋತ್ಸವ – ಫೆಬ್ರವರಿ/ಮಾರ್ಚಿ ಮಾಹೆಯಲ್ಲಿ ನಡೆಯುತ್ತದೆ.
ಬೆಂಗಳೂರಿನಿಂದ ಈ ದೇಗುಲವು 98 ಕೀ.ಮಿ ದೂರದಲ್ಲಿದೆ.
ಮೈಸೂರಿನಿಂದ ಈ ದೇಗುಲವು 67 ಕಿ.ಮೀ ದೂರದಲ್ಲಿದೆ.ಒಮ್ಮೆ ದೇಗುಲಕ್ಕೆ ಬನ್ನಿ ಶುಭವಾಗಲಿ.


ದುಷ್ಟ ಶಕ್ತಿಗಳ ಕಾಟದಿಂದ ಮುಕ್ತಿ ಹೊಂದಲು,ಧನಾತ್ಮಕ ಶಕ್ರಿಗಾಗಿ,ಹಣಕಾಸಿನ ಸಮಸ್ಯೆಗಳಿಗಾಗಿ,ಕಾರ್ಯ ಸಿದ್ದಿಗೆ,ಆರೋಗ್ಯದ ಸಮಸ್ಯೆಗಳಿಗೆ ಶ್ರೀ ಪಂಚಮುಖಿ ಹನುಮನ ಕವಚ ಧರಿಸಿದರೆ ಶುಭಫಲ ಬೇಕಾದವರು ಸಂಪರ್ಕಿಸಿ👇👇👇

ದೇಗುಲ ದರ್ಶನ ಕರ್ನಾಟಕ ಯೂಟ್ಯೂಬ್ ಚಾನಲ್👇
https://www.youtube.com/channel/UCVXhgKKSgqrt2_zbcA7dR3Q/featured?view_as=subscriber
ದೇವಿಯ ಭಕ್ತಿಗೀತೆ ಕೇಳಿ ಶುಭವಾಗಲಿ.ತಪ್ಪದೇ ನಿಮ್ಮೆಲ್ಲಾ ಫೇಸ್ಬುಕ್ ಗುಂಪುಗಳಿಗೆ ನಾವು ಬರೆಯುವ ಎಲ್ಲಾ ಲೇಖನ ಶೇರ್ ಮಾಡಿ ಕರ್ನಾಟಕ ದೇಗುಲಗಳಲ್ಲಿನ ಪವಾಡ ಮಾಹಿತಿಗಳನ್ನು ಹಂಚುವ ಕೆಲಸಕ್ಕೆ ಕೈ ಜೋಡಿಸಿ.ನಿಮ್ಮ ಒಂದೊಂದು ಶೇರ್ ನಮಗೆ ಸ್ಫೂರ್ತಿ-ಶರತ್ ಕನಸುಗಾರ.

ಮಾಟ ಮಂತ್ರ,ದುಷ್ಟ ಶಕ್ತಿಗಳ ಕಾಟದಿಂದ ಮುಕ್ತಿ ಹೊಂದಲು ಕರೆ ಮಾಡಿ-9110299372